Pages

4/7/08

ಚಿತ್ರಕಾರ

ಬರಿದೇ ಭಾವನೆಗಳ ಬಣ್ಣಗಳ ಕದಡಿ
ಬರೆಯುವನು ಪ್ರತಿ ಚಿತ್ರದ ಮುನ್ನುಡಿ
ಬಣ್ಣಗಳು ನೂರಾರು,ಬವಣೆಗಳು ಅದರಿಮ್ಮಡಿ
ಸರಳ ರೇಖೆಯೋ , ವಕ್ರ ರೇಖೆಯೋ ಎಳೆಯುವ ನೋಡಿ
ಪ್ರತಿ ಹೆಜ್ಜೆಗೂ ಬಣ್ಣಗಳದೇ ಚಿತ್ರಾಕರ್ಷಕ ಮೋಡಿ
ಪ್ರತಿ ಬಾರಿಯು ರಂಗುರಂಗಿನ ಪ್ರಶ್ನೆಗಳು ಮೂಡಿ ಬರಲು ಕಾಡಿ
ಉತ್ತರಿಸುವನು ಬದುಕಿನ ಅದೇ ಬಣ್ಣಗಳಲಿ ಹುಡುಕಾಡಿ
ನಿಜವಾಗಿ ನಮ್ಮೊಳಗಿನ ಚಿತ್ರಕಾರ ಅಲ್ಲವೇ ಬಲು-ಕಿಲಾಡಿ !

No comments: