Pages

3/10/09

ರಾಜೀನಾಮೆ

ಆ ದಿನಗಳಲ್ಲಿ (2007ರ ಮೇ ತಿಂಗಳು) ಆಫೀಸ್ ನಲ್ಲಿ ನಮ್ಮದೇ ರಾಜ್ಯವನ್ನು ಕಟ್ಟಿಕೊಂಡು ಆಳುತ್ತಿದ್ದ ಕಾಲ. ನಾವು ಏನು ಮಾಡಿದರು ಅದು ಸರಿ ಎಂಬ ಮನೋಭಾವ ದಿನೆ ದಿನೆ ( ನಿಜ ಹೇಳಬೇಕಂದರೆ ಕ್ಷಣೆ ಕ್ಷಣೆ ) ಹೆಚ್ಚಾಗುತ್ತಿದ್ದ ಕಾಲ. ಬೇರೆಲ್ಲರ ಮುಂದು ಬಡಬಡ ಮಾತಾಡಿಕೊಂಡು ನಾವು ನಮ್ಮನ್ನೆ self motivate ಮಾಡಿಕೊಳ್ಳುತ್ತಿದ್ದ ಕಾಲ ( motivate ಮಾಡಲು ಬೇರೆ ಯಾರು ಇರಲು ಇಲ್ಲ ಬಿಡಿ )! ಬೇರೆಯವರ ಮುಂದೆ ಎಷ್ಟೆ motivated ಅಂತ ತೋರಿಸಿಕೊಂಡರು "ಶಬ್ಧದೊಳೆಗಿನ ನಿಶ್ಯಬ್ಧ"( ಇಲ್ಲ ನಿಶ್ಯಬ್ಧದೊಳಗಿನ ಶಬ್ಧ ಅನ್ಕೊಳಿ )ದಂತೆ "de-motivate" ಆಗಿದ್ದ ದಿನಗಳು.ಬಹುಶಃ ಅದು 3Y Syndrome ಪ್ರಭಾವ ಇದ್ದರು ಇರಬಹುದು ! ಅಂತಹ ಸಂದರ್ಭದಲ್ಲಿ ನಡೆದ ಘಟನೆ ಇದು."Poetic Resignation" ಅನ್ನೋ ಕವಿತೆಯೊಂದು ಮೇ 10 ನೇ ತಾರೀಕಿನ ಸಂಜೆ ನನಗೆ forward mail ಮೂಲಕ ಬಂತು. ಮುಂಚೆಯು ಬಹಳಷ್ಟೂ ಸಾರಿ ಅದೆ mail ಬಂದಿದ್ದರು ಏನು ಅನ್ನಿಸಿರಲಿಲ್ಲ ( ಬಂದದ್ದೆ mail ಮತ್ತೆ ಮತ್ತೆ ಬರುವುದು ಏನು ಹೊಸತಲ್ಲ ಬಿಡಿ ...ಅದು ಜಗತ್ತು ಚಿಕ್ಕದು,ಭೂಮಿ ಗುಂಡಾಗಿದೆ,ನಾವು ಮನುಜರು ಸಮಾಜ ಜೀವಿಗಳು...,ನಾವು ಪರಿಸರವಾದಿಗಳು ಹಳತನ್ನೆ recycle ಮಾಡ್ತಾ ಇರ್ತೀವಿ ಅನ್ನೋದಕ್ಕೆ ಸಾಕ್ಷಿ :) ). ಆದ್ರೆ ಅವತ್ತು ಯಾಕೋ ಅದನ್ನ ಹಾಗೆ delete ( forward mail ಗಳ ಪಾಲಿಗೆ ಮೋಕ್ಷ ಪ್ರಾಪ್ತಿ ಮಾಡುವ ಕಾರ್ಯ ) ಮಾಡದೆ ಕನ್ನಡಕ್ಕೆ ಅನುವಾದಿಸಲೇ ಬೇಕೆಂದು ಹಟ ತೊಟ್ಟು ಕೂತು ಕನ್ನಡೀಕರಿಸಿದ್ದಾಯ್ತು. ಬಹುಷಃ ಆ ದಿನ ಹಾಗೆ ರಾತ್ರೋ ರಾತ್ರಿ ಹೀಗೆ ಕನ್ನಡೀಕರಿಸಿದ್ದರೆಂದಲೆ ನಾನೀಗಲು ಅದೆ ಕಂಪನಿಯಲ್ಲಿ ಕೆಲಸದಲ್ಲಿರುವುದು ಅಂದರೆ ತಮಗೆ ಅತಿಶಯೋಕ್ತಿಯಾಗಿ ಕಾಣಿಸಬಹುದು! ಸತ್ಯಾಸತ್ಯದ ವಿವೇಚನೆ ಈಗ ಬೇಡ ಬಿಡಿ. ಆ ದಿನದ ಭಾವನೆಗಳ ಸಾಕ್ಷಿಯಾದ್ದರಂದ ಕವನವನ್ನು(!) ಇನ್ನಷ್ಟು ಸುಂದರಗೊಳಿಸುವ ಅವಕಾಶವಿದ್ದರು ಹಾಗೆ ಮಾಡದೆ ಹಾಗೆಯೇ ಅಂದಿನ ರೂಪದಲ್ಲೆ ಇಲ್ಲಿಟ್ಟಿದ್ದೀನಿ. ಮೂಲ ಕವಿತೆ ಯಾರದು ಅನ್ನೋದು ತಿಳಿದಿಲ್ಲವಾದ್ದರಿಂದ ನಾನು ನನ್ನ ಕಾಪಿರೈಟ್ ( ರೈಟ್ ಟು ಕಾಪಿ ) ಬಳಸಿಕೊಂಡು ಅನುವಾದ ಮಾಡಿಬಿಟ್ಟಿದ್ದೇನೆ. ಮೂಲ ಲೇಖಕರಾರು ಅನ್ನೋದು ನಿಮಗ್ಯಾರಿಗಾದ್ರು ತಿಳಿದಿದ್ದರೆ ನನಗು ತಿಳಿಸಿ.

ಇಲ್ಲಿ ಬರೆದಿರುವುದಿರುವುದೆಲ್ಲವು ಯಾರನ್ನು ಉದ್ದೇಶಿಸಿಯಾಗಲಿ ದುರುದ್ದೇಶಿಸಿಯಾಗಲಿ ಬರೆದದ್ದಲ್ಲ, ಇವೆಲ್ಲವು ಕೇವಲ ಕಲ್ಪನ ಪ್ರಪಂಚದ ಕನವರಿಕೆಗಳು..ಇದ್ಯಾವುದು ಓರ್ವ ವ್ಯಕ್ತಿ,ವ್ಯವಸ್ಥೆಯನ್ನು,ಸಂಸ್ಥೆಯನ್ನು ಕುರಿತು ಬರೆದದ್ದಲ್ಲ. ಇದ್ಯಾವುದಕ್ಕು ಯಾವುದೆ ವಿಶೇಷ ಅರ್ಥವು ಇಲ್ಲ ...ಇದ್ದರೆ ಕೇವಲ ಸಾಹಿತ್ಯಕ ಚರ್ಚೆಗಳಿಗಸ್ಟೆ ಸೀಮಿತವಾದದ್ದು ಅಂತ ನಾನು ವಿಶೇಷವಾಗಿ ಹೇಳುವ ಅಗತ್ಯವಿಲ್ಲ ಎಂದು ಕೊಳ್ಳುತ್ತೇನೆ !

ಮೂಲ ಕವನ


ಕನ್ನಡೀಕರಿಸಿದ ಕವನಇನ್ನು ಸಂತೋಷಾರ್ಥಗಳು :
೧. ಸಂತೋಷಾರ್ಥಗಳು - ಸಂತೋಷ ಸಂತೋಷಕ್ಕಾಗಿ ಕಲ್ಪಿಸಿಕೊಂಡ ಅರ್ಥಗಳು
೨. 3Y Syndrome - ಸಾಮಾನ್ಯವಾಗಿ ಯಾವುದೆ ಕಂಪನಿಯಲ್ಲಿ ಸುಮಾರು ಮೂರು ವರುಷ ಕಳೆದ ನಂತರ ಕಾಣಿಸಿಕೊಳ್ಳುವ ಲಕ್ಷಣಗಳು. ಕಂಪನಿಯ ಗುರುತ್ವಾಕರ್ಷಣ ಶಕ್ತಿವಲಯದ ಹೊರವಲಯದಲ್ಲಿ ನಿಂತು "ಕೆರೆ-ದಡ" ಆಡುವ ಮನಸ್ಥಿತಿ.
೩. ಕಾಪಿರೈಟ್ - ರೈಟ್ ಟು ಕಾಪಿ
೪. ಕನ್ನಡೀಕರಣ - ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ...ಕನಿಷ್ಟ ಪಕ್ಷ ಕನ್ನಡಿಯಲ್ಲಾದರು !( ಉದಾ: ನಿನ್ನ ಮುಖ ಕನ್ನಡೀಲಿ ನೋಡ್ಕೊಂಡಿದ್ದೀಯಾ ಅಂತಾ ಬಹಳಷ್ಟು ಜನ ಬಳಸ್ತಾರೆ,ಅರ್ಥ ಗೊತ್ತಿಲ್ಲ ಛೇ ಪಾಪ )
೫.ಕೆರೆ-ದಡ - ಚಿಕ್ಕವಯಸ್ಸಿನಲ್ಲಿ ನಾವೆಲ್ಲರು ಆಡುತ್ತಿದ್ದ ಆಟ...ಇವತ್ತು ಕಾರ್ಪೊರೆಟ್ ಪ್ರಪಂಚದಲ್ಲಿ ಬಹಳ ಚಾಲ್ತಿಯಲ್ಲಿರುವ ಆಟ. ವಿವರ ಇನ್ಯಾವಗಲಾದ್ರು ಕೊಡ್ತೀನಿ.
೬.ಲೇಖನದಲ್ಲಿ ನಾವು,ನಮ್ಮ ಪದಗಳ ಬಳಕೆ - self respect ಕೊಟ್ಟು ಕೊಳ್ಳುವ ಪರಿ or ಇನ್ನೊಬ್ಬ ಜೀವಿಯು ಇದಕ್ಕೆಲ್ಲ ಸಾಕ್ಷಿಯಾಗಿದ್ದ ಅನ್ನೋ ಕುತೂಹಲ ಹುಟ್ಟಿಸುವ ಪ್ರಯತ್ನ ( ಇನ್ನೊಬ್ಬನು ಇದ್ದ ಅಂದರೆ ನನ್ನೊಬ್ಬನನ್ನೆ ಜನ ಬಯ್ಯೋಲ್ಲ ಅನ್ನೋ ಧೈರ್ಯ!)

5 comments:

adb said...

konegu shuru mADdiyalla!! Continue
ಸಂತೋಷಾರ್ಥ.... :)

Santhosh Mugoor said...

he he ...konegu shuru maaDide. Psychological Blogging ge chennaagittu ansatte !

Susheel Sandeep said...

sooper...
aadre swagata (in brackets) swalpa jasteene aaytu annistu :)

Santhosh Mugoor said...
This comment has been removed by the author.
Santhosh Mugoor said...

haudu susheel...pyschological blogging na prabhaava adu !

innu mumde prakaasaha jaasti aadre svagata kaDime aagabahudu ankoteeni!