Pages

8/1/09

ನೆನಪು !

ಇನ್ನೂ ನಿನ್ನೆಯದೆ ನೆನಪುಗಳು,
ನಾಳೆಯದೆ ಹಗಲುಗನಸಗಳು..
ಛೇ! ಇಂದೇ ಮರೆತು ಹೋಗಬೇಕೆ ?

ನಿನ್ನೆಯೂ ನೆನಪಿತ್ತು..
ನಾಳೆ ಮತ್ತೆ ನೆನಪಾಗಬಹುದೇನೋ..
ಇಂದೆ ಮರೆತುಹೋಗಬೇಕೆ ? ಹಾಳು ಮರೆವು..

ನಿನ್ನೆಯ ನೆನಪುಗಳ, ನಾಳೆಯ ಕನಸುಗಳ ನಡುವೆ
ಇಂದಿನ ನಡೆಯೇ ಮರೆತು ಹೋಗಬೇಕೆ ?!

ನಿನ್ನೆ ಮರೆತದ್ದು ಇಂದು, ಇಂದಿನದು
ನಾಳೆ ನೆನಪಾಗುವುದೋ ಮತ್ತೆ!

"ನೆನಪು ಮರೆವು"ಗಳ ಆಟದಲಿ ಹೊಸಕನಸುಗಳ
ಕಟ್ಟಿಕೊಂಡು ಸಾಗಿಹುದು ಜೀವನ ಮುಂದೆ !!

PS : ಹಾಳು ಮರೆವು, ನೆನಪಿನ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ !!

No comments: