ಮೊದಲ ಬಾರಿಗೆ "ಗಾಂಧಿ" ಎನ್ನುವ ಹೆಸರನ್ನು ಅಥವಾ ಪದವನ್ನು ಕೇಳಿದ್ದು ಯಾವಾಗ ಅನ್ನೋದು ನೆನಪಿಗೆ ಬರ್ತಾ ಇಲ್ಲ. ಅಷ್ಟು ಹಳತಾಗಿ ಹೋಗಿದೆ "ಗಾಂಧಿ" ಎಂಬ ಪದ ಬದುಕಿನಲ್ಲಿ. ಮೋಹನ ದಾಸ ಕರ್ಮಚಂದ್ ಗಾಂಧಿ "ಮಹಾತ್ಮ ಗಾಂಧಿ"ಯಾಗಿ "ಮಹಾತ್ಮ"ರಾಗಿ ಕೊನೆಗೆ ಗಾಂಧಿಯಾಗಿ ಯಾವಾಗ ಹೇಗೆ ರೂಪಾಂತರಗೊಂಡರೋ ಗೊತ್ತಿಲ್ಲ.ಇಂದು ಗಾಂಧಿ ಒಬ್ಬ ವ್ಯಕ್ತಿಯಾಗಿ ಉಳಿದಿಲ್ಲ. "ಗಾಂಧಿ" ಒಂದು ಮನಸ್ಥಿತಿಯಾಗಿ ಬಿಟ್ಟಿದೆ....ಶಾಂತಿ-ಅಹಿಂಸೆಗಳೆಂಬ ಕಲ್ಪನೆಗಳಿಗೆ ಬಣ್ಣಕಟ್ಟುವ, ಅದನ್ನು ಮೂರ್ತರೂಪಕ್ಕೆ ಇಳಿಸುವ, ಸತ್ಯಂ ಶಿವಂ ಸುಂದರಂ ಅನ್ನುತ್ತಾ ಸತ್ಯದಲ್ಲಿ ಸೌಂದರ್ಯವನ್ನು ಹಾಗೂ ಶಿವನನ್ನು ಕಾಣುವ, ವ್ಯಕ್ತಿಗಿಂತ ವಿಚಾರಗಳನ್ನು ಆದರಿಸುವ, ಅಂದು ಕೊಂಡದ್ದನ್ನು ಸಾಧಿಸಿಯೇ ತೀರಿಸುವ, ಸಾಮಾನ್ಯ ಮಹಾತ್ಮನಾಗುವ "ಅಸಾಮಾನ್ಯ" ಮತ್ತು "ತನ್ನೊಳಗಿನ ಮಹಾತ್ಮ"ನ ಮುಂದೆ ತಾನೆ ಸಾಮಾನ್ಯನಾಗಿ ಬಿಡುವ, ಕೊನೆಗೆ ಎಲ್ಲರಿಗೂ ಸಹಾಯಮಾಡ ಹೊರಟು ತಾನೆ ಅಸಹಾಯಕನಾಗಿ ಬಿಡುವ "ಮನಸ್ಥಿತಿಗೊಂದು ಪದ"ವಾಗಿಬಿಟ್ಟಿದೆ. "ಗಾಂಧಿ ಎಂಬ ಮನಸ್ಥಿತಿ"ಯ ತಲಪುವ ಕ್ರಿಯೆಯಲ್ಲಿ ಪ್ರತಿಯೊಬ್ಬನಿಗೂ ಒಬ್ಬಬ್ಬ ಗಾಂಧಿ ಕಂಡುಬರುತ್ತಿದ್ದಲ್ಲಿ ಆಶ್ಚರ್ಯವೇನು ಇಲ್ಲ. ಈ ದಿನ ಪ್ರತಿಯೊಬ್ಬರು ಗಾಂಧಿಯೆಂಬ ವ್ಯಕ್ತಿಯ ಕುರಿತು ಅವರವರದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ ಅದು "ಗಾಂಧಿ ಎಂಬ ಮನಸ್ಥಿತಿ"ಯ ಒಂದು ಪ್ರಕಟಿತ ರೂಪ ಅಷ್ಟೇ !!
ಗಾಂಧಿಯೆಂಬ ಮನಸ್ಥಿತಿಯ ಕಲ್ಪನೆಯ ಮೂರ್ತರೂಪ - ಗಾಂಧಿಯ ಜನ್ಮ ದಿನ ಇಂದು. ನನ್ನ ಕಡೆಯಿಂದ ನಮನ- ಗಾಂಧಿಗೆ, "ಗಾಂಧಿ... ಎಂಬ ಮನಸ್ಥಿತಿಗೆ" !!
7 comments:
ಸೂಪರ್ ಗುರು ಈ ಬರಹ!
ಸಕತ್ ಇಷ್ಟವಾಯ್ತು...ಸಲಾಂ 'ಗಾಂಧಿ' ಅನ್ನೋ ಮನಸ್ಥಿತಿಗೆ...'ಗಾಂಧಿ' ಅನ್ನೋ ಆ ಸರಿದಾರಿಗೆ
ಮೋಹನ್ ದಾಸ್ ಕರ್ಮಚಂದ್ ಗಾಂಧಿ ಎಂಬ ವ್ಯಕ್ತಿ ಸತ್ತು ಸುಮಾರು ೬೧ ವರುಷಗಳಾಯಿತು. ಇನ್ನು ಆ ವ್ಯಕ್ತಿ ಬಗ್ಗೆ ಎಲ್ಲೆಡೆ ಮಾತಾಡಿ ಮಾತಾಡಿ ಮಾತಾಡಿದ್ದನ್ನು ನೋಡಿ ನೋಡಿ ಸಾಕಾಯ್ತು ಅನ್ಸಲ್ಲ ಅಲ್ವಾ ? ನಾವ್ಯಾಕೆ ಇನ್ನು ಭಾರತದ ಇಂದಿನ ಸ್ಥಿತಿಯ ಬಗ್ಗೆ ಆತನ ಮೇಲೆ ಆರೋಪ ಮಾಡುತ್ತಲೋ ಇಲ್ಲವೆ ಆತನು ತಪ್ಪೆ ಮಾಡಲಿಲ್ಲವೋ ಎನ್ನುವ ರೀತಿಯಲ್ಲಿ ವಾದ ಮಾಡ ಹೊರಡುತ್ತೇವೆ? ಅಂತಾ ಯೋಚಿಸುತ್ತಾ ಹೋದಂತೆ ಗಾಂಧಿ ಒಬ್ಬ ವ್ಯಕ್ತಿಯಿಂದ ಮನಸ್ಥಿತಿಯಾಗಿ ಬದಲಾಗಿ ಹೋಗಿದ್ದಾರೆ ಅನ್ನಿಸಿತು.
ಅದಕ್ಕೆ ನನ್ನ ಕಡೆಯಿಂದ ಒಂದು ನಮನ ಅರ್ಪಿಸಬೇಕೆನ್ನಿಸಿತು ಗುರು ...
ಧನ್ಯವಾದ ನಿನ್ನ ಅಭಿಪ್ರಾಯಕ್ಕೆ !
ಗಾಂಧಿಯ ಸರಿ ತಪ್ಪುಗಳ ಮಾತಾಡುವಾಗಲೆಲ್ಲ ಕಗ್ಗವನ್ನು ಕುರಿತು ಡಿ.ವಿ.ಜಿ. ಹೇಳಿಕೊಂಡ ಈ ಮಾತುಗಳನ್ನು ನೆನಪಿಸಿಕೊಳ್ಳೋದು ಪ್ರಸ್ತುತ ಅನ್ನಿಸುತ್ತೆ.
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ|
ಇಂದು ನಂಬಿಹುದೆ ಮುಂದೆಂದುಮೆಂದಲ್ಲ||
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು|
ಇಂದಿಗೀ ಮತವುಚಿತ - ಮಂಕುತಿಮ್ಮ ||
ಗಾಂಧಿ ಎಂಬ ಮನಸ್ಥಿತಿಯು ಹಾಗೆ ಅಲ್ವಾ ?
gandhi annOdondu manasthiti, houdu. Good write up Santhosh
thanks Manju sir.
ಅಬ್ಬಾ! ತಾವು ಬರಿಯೋದು ಇನ್ನೂ ಮರ್ತಿಲ್ಲ ಅನ್ನೋದು ಖಚಿತವಾಯ್ತು.
ನೀನು ಹೇಳಿರೋದೇನೋ ನಿಜ. ಗಾಂಧಿ ಅನ್ನೋದು ಬರೀ ಒಂದು ಮನಸ್ಥಿತಿ ಆಗಿದೆ. ಆದ್ರೆ ಆ ಸ್ಥಿತಿಲ್ಲಿ ಎಷ್ಟು ಜನ ಇದಾರೆ ಅನ್ನೋದು ಪ್ರಶ್ನೆ.
ಇವಾಗ ಜನ್ರಿಗೆ 'ಗಾಂಧಿ' ಅನ್ನೋ ಪ್ರಾಣಿ ರಜೆಗೆ ಕಾರಣ ಅನ್ನೋದು ಬಿಟ್ಟ್ರೆ, ಅದರ/ ಅವರ (ಮನಸ್ಥಿತಿಯ / ವ್ಯಕ್ತಿಯ) ಮಹತ್ವ ಇದೆ ಅನ್ಸತ್ತಾ? ಗಾಂಧಿ & ಅವರ ವಿಚರಗಳು ಬರೀ fashion statement ಅಥ್ವಾ conversation starter ಆಗಿ ಉಲ್ಕೊಂಡಿದಿಯಾ?
ಇರ್ಲಿ. ಲೇಖನ ತುಂಬಾ ಚೆನ್ನಾಗಿದೆ...... ಭಾವಾನುವಾದ?
:), ನಿಜ ನಾನಿನ್ನು ಬರೆಯೋದು ಮರೆತಿಲ್ಲ!! ಆದ್ರೆ ನನ್ನ ಬರಹಗಳೆಲ್ಲ ಹೆಚ್ಚಾಗಿ "Psychological blogging"ನ ಕೆಟಗರಿಗೆ ಸೇರತ್ತೆ.
ಮಹತ್ವ ಇದ್ದೆ ಇದೆ, ನಾವು ಕೊಟ್ಟಷ್ಟು.
ಬ್ಲಾಗ್ನಲ್ಲಿನ ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು. ಇನ್ನು ಭಾವಾನುವಾದ...ಖಂಡಿತ ಮಾಡಬೇಕು !!
Post a Comment