ನನ್ನ ಹೃದಯ ವೀಣೆಯ "ಶೃತಿ" ನೀ ಮಿಡಿದಾಗ
ಕಲ್ಲಾದ ಹೃದಯದಲ್ಲೂ ಮೂಡಿಸಿಹುದುದೆಂತಹುದೋ ಕಂಪನ
ಬರಡಾದ ಭಾವಗಳಿಗೂ ಮಾಡಿಸಿಹುದೂ ಹೊಂಗನಸುಗಳ ಸಿಂಚನ
ನನ್ನ ಮೌನದೊಳಮನೆಯ "ವಾಣಿ" ನೀ ನುಡಿದಾಗ
ಜಡಗಟ್ಟಿದ ಜೀವಿಯಲು ಮಾಡಿಸಿದೆ ಪ್ರಾಣ ಸಂಚಲನ
ನನ್ನ ನಿಶ್ಚೇತ ಕಣಕಣಗಳಲ್ಲೂ ತುಂಬಿದೆ ನವಚೇತನ
ನನ್ನ ನನಸಿನ ಭಾವಲಹರಿಯ "ಸ್ವಪ್ನ" ನೀ ಕಾಡಿದಾಗ
ನೀರಸವಾದ ಜೀವನದಲ್ಲೂ ಉಂಟಾಗಿದೆ ಉಹಿಸಲಾಗದ ರೋಮಾಂಚನ
ನೋವಿನಲ್ಲಿಯೂ ನಲಿವ ಕಂಡಿದೆ ಹರುಷಗೊಂಡ ಮೈಮನ
ಹೃದಯದೊಳಗಣ ಭಾವನೆಗಳ 'ಶೃತಿ' , ಅಂತರಂಗದ ಮಾತುಗಳ 'ವಾಣಿ'
ವಿಚಾರಧಾರೆಗಳ ಅಮೂರ್ತ 'ಸ್ವಪ್ನ' ಇವೆಲ್ಲವಾಗಿಹವಿಲ್ಲಿ ಕಾವ್ಯ ;
ಪದಪುಂಜಗಳೊಡನೆ ಭಾವನೆಯು ಸೇರಿದಾಗ, ನನ್ನೊಳಗಣ 'ಕವಿಪ್ರಜ್ಞೆ' ಜಾಗೃತವಾದಾಗ !
No comments:
Post a Comment