ಯುಗ ಯುಗಾದಿ ಕಳೆದರೂ ಯುಗಾದಿಯೇನೋ ಎಂದಿನಂತೆ ಮರಳಿ ಬರುತಿದೆ
ಹೊಸ ಹರುಷ,ಬೃಂಗದ ಸಂಗೀತ,ಹೂವಿನ ನಸುಗಂಪು,ಜೀವಕಳೆಯ ಹೊಸತು ತರುತಿದೆ.
ಅಖಿಲ ಜೀವಜಾತವೂ ಹೊಂಗೆ ಹೂವ ತೊಂಗಲಲ್ಲೋ , ಬೃಂಗದ ಸಂಗೀತದಲ್ಲೋ
ಹೂವಿನ ನಸುಗಂಪಿನಲ್ಲೋ ವರುಷ ವರುಷವೂ ಹರುಷ ಕಂಡು ಕೊಳುತಿದೆ.
ಅದೇ ಹೊಂಗೆಹೂವು , ಬೃಂಗದ ಸಂಗೀತ , ಹೂವಿನ ನಸುಗಂಪು
ನಮಗೆ ಮಾತ್ರ ಹರುಷ ತಾರದ್ಯಾತಕೋ ? ಯುಗಾದಿ ನಮ್ಮನಷ್ಟೇ ಮರೆತಿದೆಯೋ ?
ಯುಗಾದಿ ತಂದ ಸಹಜ ಹರುಷ ಸಾಲದ್ಯಾತಕೋ ? ವರುಷ ವರುಷವು ನಮ್ಮಾಸೆಯಷ್ಟೇ ಬೆಳೆಯುತಿದೆ
ಬಾಲ್ಯದಲ್ಲಿ ಹರಯ , ಹರಯದಲ್ಲಿ ಬಾಲ್ಯ ಬಯಸುವ ಪರಿ ನಮ್ಮಲ್ಲಷ್ಟೇ ಉಳಿದಿದೆ
ಅಖಿಲ ಜೀವಜಾತದಂತೆ ಯುಗ ಯುಗಾದಿಯಲ್ಲೂ ಇದ್ದುದರಲ್ಲೇ ಹರುಷ ಪಡುವ
ಇಲ್ಲದುದನೇ ನೆನೆಸಿ ಕೊರಗದ ಸಾಜತೆಯ ವರವೆಮಗೆ ಬೇಡಿ ಕೊಳುವ
ತಮಗೆಲ್ಲರಿಗೂ ಸರ್ವದಾರಿ ಸಂವತ್ಸರದ ಶುಭಾಶಯಗಳು. - ಸಂ.K
PS : ಇದು ಬೇಂದ್ರೆಯವರ ಯುಗಾದಿಗೆ ಖಂಡಿತವಾಗಿಯೂ ಉತ್ತರವಲ್ಲ. ಬೇಂದ್ರೆಯವರ ಯುಗಾದಿಯನ್ನೇ ಹಾಡಿಕೊಂಡು ಬೆಳೆದವನು ನಾನು ಕೂಡ. ಸಹಜವಾದದ್ದಾವುದು ಹರುಷ ಕೊಡದ ಇಂದಿನ ಪರಿಸ್ಥಿಯಲ್ಲಿ ಬೇಂದ್ರೆಯವರ ಯುಗಾದಿಯಿಂದ ಪ್ರೇರಿತನಾಗಿ ಬರೆದ ಕವನ !! ಇದು. – 07/04/08
No comments:
Post a Comment