ಬದುಕಿನ ವಿವಿಧ ಕಾಲಘಟ್ಟಗಳಲ್ಲಿ ಬರೆದ ಕೆಲವು ಚುಟುಕುಗಳನ್ನ ಇಲ್ಲಿ ಒಂದೆಡೆಯಿಡುತ್ತಿದ್ದೇನೆ.
ಇರುಳಿಗೆ ತೆರೆಯೆಳುಯುವನೋ ಆ ನೇಸರನು
ಮೋಡದ್ ನೆರಳಿಗೆ ಯಾಕ್ ಬೆದರ್ವಯೋ
ಗಾಳಿ ಬೀಸೇ ತನ್ತಾನೆ ಸರಿಯ್ವುದೋ
ಬರಿಯೇ ಬೊಗಳೆ ಮಂತ್ರವಲ್ಲವೋ
ಇದುವೇ ನಮ್ಮ ನಿಮ್ಮ ಜೀವನಯಂತ್ರ
ವ ನಡೆಸೋ ನಿಜ ತಂತ್ರಗಳು
ಬರಿಯೇ ಮಂತ್ರದಿಂ ಆಗುವುದಾದರೂ ಏನ
ತಂತ್ರಗಳು ಆಗೇ ಜೀವನ್ಮಂತ್ರಗಳು ಏಕಾಗುವುದು
ನೋಡ ಜೀವನ ಅತಂತ್ರ ?
ಇರುವದಂ ಬಿಟ್ ಬರುವುದಕ್
ಕಾಯ್ದ್ ಕುಳಿತೊಡೆ ಇರುವುದು ಗತವಾಗಿ
ಹೋಗ್ವುದೋ ಭೂತದೊಳಗೆ
ಬರೀ ಪುಸ್ತಕದ ಹುಳುವಾದರೇನ್ ಬಂತೋ
ಅರಿಯೋ ಹುಳುವಿನ್ ಜೀವನ್ಮರ್ಮವ , ಫಲವ
ಮರೆತು ನಡೆಸೋ ನಿನ್ ಪಾಲಿನ ಕರ್ಮವ
ಬೇಡಗಳು ಬೇಕಾಗುವುವು , ಬೇಕುಗಳು
ದೂರವಾಗುವುವು ಕನಸಿನ ಬಣ್ಣ ಕಳಚೇ
ನನಸಿನೊಳು ತಿಳಿಯೋ
ಕನಸಿನೊಳು ಬದುಕು ಹನುಮ ಕಂಡ ಭಾಸ್ಕರ ,
ನನಸಿಗಿಳಿಯೇ ಕೆಂಡಸಾಗರ ; ಹಣ್ಣಾದರ್
ಉಳಿವೇ , ಕೆಂಡವಾದರ್ ಅಳಿವೇ
No comments:
Post a Comment