ಅಲ್ಲೊಂದು ಊರು. ಊರ ಪಕ್ಕದಲ್ಲೊಂದು ನದಿ. ಹರಿಯುವ ನದಿಯ ಅಲೆಯೇರಿ ಸುಖವು ಆಗಗ್ಗೆ ಆ ಊರಿಗೆ ಬಂದು ನೆಲೆ ನಿಲ್ಲದೆ ಹೊರಟು ಹೋಗುತ್ತಿತ್ತು. ಸುಖವನ್ನು ಹಾಗೆ ಹರಿಯ ಬಿಡುವುದು ಊರ ಮಂದಿಗೆ ಸರಿ ಕಾಣಲಿಲ್ಲ. ಅವರೆಲ್ಲರು ಸೇರಿ ಹರಿಯುವ ನದಿಗೆ ಅಣೆಕಟ್ಟು ಕಟ್ಟಿದರು, ಸುಖವನ್ನು ಸ್ಥಿರಗೊಳಿಸಲು. ಕಟ್ಟಿದ ಅಣೆಕಟ್ಟು ಏರಿ ಇಳಿಯುವ ಅಲೆಗಳನ್ನು ಕಟ್ಟಿ ಹಾಕಿತು. ಈಗ ಜನ ಅಲೆಗಳಿಗಾಗಿ ಅಲೆದಾಡುತ್ತಿದ್ದಾರೆ, ಹಾಗೆ ಅಲೆಯೇರಿ ಬರುತ್ತಿದ್ದ ಸುಖಕ್ಕಾಗಿಯೂ ಕೂಡ !!
-ಸಂK
4 comments:
Really imressive... Excellent...
ಧನ್ಯವಾದಗಳು!
I got this link by abhi... Really good sir... thumba chennagide
ಧನ್ಯವಾದಗಳು ಚೇತನ್ ತಮ್ಮ ಅಭಿಪ್ರಾಯಕ್ಕೆ.
Post a Comment