ಹುಡುಕುತ್ತ ಹೊರಟೆ ಸಂತಸವ,
ಎಂ.ಟಿ.ಆರ್, ಸಿ.ಟಿ.ಆರ್, ಜನತಾ
ವಿದ್ಯಾರ್ಥಿ ಭವನ, ಮೈಲಾರಿಯ ದಾರಿಯಲಿ.
ಕಂಡುಕೊಂಡೆ ಸಂತಸವ - ದೋಸೆಗಾಗಿ
ಕಾಯುವ ಸರತಿ ಸಾಲಿನಲಿ!
ಹುಡುಕುತ್ತಾ ಹೊರಟೆ ಸಂತಸವ
ಕಬ್ಬನ್ ಪಾರ್ಕ್, ಲಾಲಬಾಗ್
ಕುಕ್ಕರಹಳ್ಳಿ , ಚಾಮುಂಡಿ ಬೆಟ್ಟದ ತಪ್ಪಲಲ್ಲಿ.
ಕಂಡುಕೊಂಡೆ ಸಂತಸವ - ನೇರ ನುಡಿ,
ನೇರನಡೆಯ ನಡಿಗೆಯಲಿ !
ಹುಡುಕುತ್ತಾ ಹೊರಟೆ ಸಂತಸವ
ಮೈಸೂರ ಮಲ್ಲಿಗೆ, ಮೂಕಜ್ಜಿಯ ಕನಸು
ನಾಕುತಂತಿ, ಜುಗಾರಿ ಕ್ರಾಸಿನಲಿ.
ಕಂಡುಕೊಂಡೆ ಸಂತಸವ - ಕವಿ
ಹೃದಯದೊಡೆಗಿನ ಮಾತುಕತೆಯಲಿ!
ಕೆದಕುತ್ತಾ ಹೊರಟಾಗ ಅರಿತದ್ದು-
ದೋಸೆಗಾಗಿನ ಕಾಯುವಿಕೆಯ ರುಚಿ,
ಹಸಿರುಹಾಸಿನ ಮೇಲಣ ನಡಿಗೆ
ಕನ್ನಡಕಾವ್ಯದ ಮನನ..
ಈ ಎಲ್ಲದರದೊಳಗಿನ ಸಂತಸದ
ಸಾಮಾನ್ಯ ಅಂಶ - ನಾನೇ ನಾನೇ....!
ನಿಜ ಸಂತಸಕೆ ದಾರಿ
ನಾನು ನನ್ನೊಳಗೆ ಇರುವುದೊಂದೆ!!
- ಸಂ.K
No comments:
Post a Comment