Pages

1/20/21

ಏಕಾಂಗಿಯಾಗೇ ನಡೆ ನೀ

ಕವಿ ರಬೀಂದ್ರನಾಥರ ಸ್ಫೂರ್ತಿಗೀತೆ "ಎಕ್ಲ ಚಲೋ ರೇ" ಹಾಡಿನಿಂದ ಪ್ರೇರಿತ ಅನುವಾದ.

"ಏಕಾಂಗಿಯಾಗೇ ನಡೆ ನೀ"

ನಿನ್ನ ಕರೆಗಾರು ಓಗೊಡದಿರೆ-
ಏಕಾಂಗಿಯಾಗೇ ನಡೆ ನೀ;

(ನಿನ್ನೊಡನೆ) ಯಾರು ನುಡಿಯದಿರೆ,  ಎಣಿಸದಿರು ನೀ ನಿರ್ಭಾಗಿಯೆಂದು ;
(ನಿನ್ನೊಡನೆ) ಯಾರು ನುಡಿಯದಿರೆ,  ಎಲ್ಲರೂ ದೂರ ನಡೆದೆಡೆ, ಎಲ್ಲರೂ (ನುಡಿಯಲು) ಅಂಜಿದರೆ,
ತೆರದ ಎದೆಯಲಿ ಹಿಂಜರಿಯದೆ ನುಡಿ ನಿನ್ನ ಮನದೊಡನೆ

ಎಲ್ಲರೂ ದೂರ ಹೋದಲ್ಲಿ,ಓ  ನಿರ್ಭಾಗಿಯೇ, ಎಲ್ಲರೂ ದೂರ ಹೋದೆಡೆ
ಊಹೆಗೆಟುಕದ ನಿನ್ನೀ ಹಾದಿಯಲಿ ಯಾರು ತಿರುಗಿ ನೋಡದಿರೇ, 
ಹೊರಟು ಬಿಡು ಮುಳ್ಳಿನಪಥದಲಿ ನೆತ್ತರ ಲೆಕ್ಕಿಸಿದೆ, 
ಏಕಾಂಗಿಯಾಗೇ ನಡೆ ನೀ


ಯಾರು ಬೀರದಿರೆ ಬೆಳಕ ನೀ ನಡೆಯುವೆಡೆಗೆ, ಓ ನಿರ್ಭಾಗಿಯೇ,  
ಕಗ್ಗತ್ತಲ ರಾತ್ರಿ ಗುಡುಗಿನೊಡನೆ ಮುಸಲಧಾರೆಯ ತಂದಿತ್ತೆಡೆ-
ಮಿಂಚು ಹೊತ್ತಿಸಲಿ ಬೆಳಕಿನ ಕಿಡಿಯ ನಿನ್ನಲಿ, ಬೆಳಗಲಿ ನೀ ನಡೆವ ಹಾದಿಯ;

ನಿನ್ನ ಕರೆಯನಾರು ಗಮನಿಸದಿರೆ,
ಏಕಾಂಗಿಯಾಗೇ ನಡೆ ನೀ ;


ಅನುವಾದ : ಸಂK (ಸಂತೋಷ್ ಮೂಗೂರ್)

--------------------------------------------------    

ಮೂಲ ಕವನ ಮತ್ತು ಇಂಗ್ಲೀಷ್ ಅನುವಾದ : ರಬೀಂದ್ರನಾಥ ಟ್ಯಾಗೋರ್

If there is no-one responding to your call - then go on alone

If no-one speaks (to you), don't think you are unfortunate, if no-one speaks (to you),
If everyone turns away, if everyone fears (to speak), then with an open heart without hesitation speak your mind alone 

If everyone walks away, O unlucky one, everyone walks away
If no-one looks back towards the (your) unpredictable path, then with thorn pricked (of the path) bloodied feet, walk alone
If no-one heeds your call - then walk alone 

If no-one shines a light (on the path), O unlucky one,
If the dark night brings thunder and storm at the door - then let the lightning ignite the light in you alone to shine on the path 

If no-one heeds your call - then walk alone 

No comments: