ದೀಪದ ಕೆಳಗೆ ಕತ್ತಲೆ
ಬೆಳಕಿದ್ದರಷ್ಟೆ ನೆರಳು!
ಬೆಳಕಿನೆಡೆಗೆ ಹೊರಟರೆ ಹಿಂದೆ,
ಬೆಳಕಿಂದ ದೂರ ಸರಿದರೆ ಮುಂದೆ!
ಬೆಳಕ ಹತ್ತಿರ ಹೋದಷ್ಟೂ ದೊಡ್ಡದು
ಬೆಳಕಿಂದ ದೂರ ಸರಿದಷ್ಟೂ ಚಿಕ್ಕದು!
ಬೆಳಕು ಹೆಚ್ಚಿದಷ್ಟು ಇನ್ನಷ್ಟು ಸ್ಪಷ್ಟ
ಬೆಳಕು ಮಾಸಿದಷ್ಟು ಅಸ್ಪಷ್ಟ!
ಆಗುವುದೆಲ್ಲವು ಬೆಳಕಿಂದಲೇ ಎನ್ನುವುದಾದರೆ
ನಾನು ನನ್ನದಾದರು ಏನು?
ನೆರಳೂ ನನ್ನಣತಿಯಲ್ಲಿ ಇಲ್ಲದಿರೆ?
ಬೆಳಕು ಬೇರೆ ನಾನು ಬೇರೆ
ಎಲ್ಲವೂ ಅದರಿಂದಲೇ
ನಾನು ನಿಮಿತ್ತ ಮಾತ್ರವೇ
ಎನ್ನುವಷ್ಟರಲ್ಲೇ
ಆ ಒಂದು ಕ್ಷಣ
ನಾನು ಇದ್ದು ....ಬೆಳಕೂ ಇದ್ದು... ನೆರಳಿಲ್ಲದ ಆ ಕ್ಷಣ !!
ನಾನು ಬೆಳಕ ಸೇರಿ ಒಂದಾಗಿ
ನೆರಳ ಮೀರಿದ ಆ ಕ್ಷಣ !!
ಅಳಿದದ್ದು ಏನು? ಉಳಿದದ್ದು ಏನು?
ಎನ್ನೋ ಜಿಜ್ಞಾಸೆ ಮೀರಿದ ಆ ಕ್ಷಣ...
ಅದುವೇ ...
ಹೃದಯ ಕಮಲವರಳುವ ಕ್ಷಣ!
ಬೆಳಕಿದ್ದರಷ್ಟೆ ನೆರಳು!
ಬೆಳಕಿನೆಡೆಗೆ ಹೊರಟರೆ ಹಿಂದೆ,
ಬೆಳಕಿಂದ ದೂರ ಸರಿದರೆ ಮುಂದೆ!
ಬೆಳಕ ಹತ್ತಿರ ಹೋದಷ್ಟೂ ದೊಡ್ಡದು
ಬೆಳಕಿಂದ ದೂರ ಸರಿದಷ್ಟೂ ಚಿಕ್ಕದು!
ಬೆಳಕು ಹೆಚ್ಚಿದಷ್ಟು ಇನ್ನಷ್ಟು ಸ್ಪಷ್ಟ
ಬೆಳಕು ಮಾಸಿದಷ್ಟು ಅಸ್ಪಷ್ಟ!
ಆಗುವುದೆಲ್ಲವು ಬೆಳಕಿಂದಲೇ ಎನ್ನುವುದಾದರೆ
ನಾನು ನನ್ನದಾದರು ಏನು?
ನೆರಳೂ ನನ್ನಣತಿಯಲ್ಲಿ ಇಲ್ಲದಿರೆ?
ಬೆಳಕು ಬೇರೆ ನಾನು ಬೇರೆ
ಎಲ್ಲವೂ ಅದರಿಂದಲೇ
ನಾನು ನಿಮಿತ್ತ ಮಾತ್ರವೇ
ಎನ್ನುವಷ್ಟರಲ್ಲೇ
ಆ ಒಂದು ಕ್ಷಣ
ನಾನು ಇದ್ದು ....ಬೆಳಕೂ ಇದ್ದು... ನೆರಳಿಲ್ಲದ ಆ ಕ್ಷಣ !!
ನಾನು ಬೆಳಕ ಸೇರಿ ಒಂದಾಗಿ
ನೆರಳ ಮೀರಿದ ಆ ಕ್ಷಣ !!
ಅಳಿದದ್ದು ಏನು? ಉಳಿದದ್ದು ಏನು?
ಎನ್ನೋ ಜಿಜ್ಞಾಸೆ ಮೀರಿದ ಆ ಕ್ಷಣ...
ಅದುವೇ ...
ಹೃದಯ ಕಮಲವರಳುವ ಕ್ಷಣ!
No comments:
Post a Comment