ಜೀವಚರಿತ್ರೆಯಲ್ಲಿ
ಮಂಗನಿಂದ ಮಾನವ...
ಮಂಗನಿಂದ ಮಾನವ ..
ಕೇಳಿ ಕೇಳಿ ಸಾಕಾಗಿತ್ತು
ಮಾನವ ಜೀವ ಬೇಸತ್ತಿತ್ತು
ಬದಲಾಯಿಸಬೇಕು
ಜಗದ ಭವಿಷ್ಯವ ಎನ್ನೋ ಹಂಬಲ
"ಮಂಗಳನ ಅಂಗಳದಲ್ಲಿ ಮಾನವ
ನೆಂದು ಬರೆದಿಡ ಬೇಕು"
ನಿರ್ಧಾರ ಅಚಲವಾಗಿತ್ತು..
ಸರ್ಕಾರದ ಸಮ್ಮತಿಯು ದೊರಕಿತ್ತು
ಮೊದಲ ಹೆಜ್ಜೆ...ಇಟ್ಟಾಗಿತ್ತು
ಈ ಮಂಗಳವಾರ...ಶುಭದಿನ!
ಎಲ್ಲ ಗ್ರಹಗಳು ಕೂಡಿ
ಬಂದಿದ್ದರಿಂದಲೋ ಏನೋ..
ಇಂದು ರಂಗಣ್ಣ , ರಾಧಕ್ಕರೂ
ಕೂಡ ಇದರದ್ದೇ ಚರ್ಚೆ
ಮಂಗಳನೆಡೆಗೆ ಮಾನವ...
ಮಂಗಳನೆಡೆಗೆ ಮಾನವ...
ಬೇರೆ ಬ್ರೇಕಿಂಗ್ ನ್ಯೂಸ್ಗಳ ಭರಾಟೆಇಲ್ಲ..
ಕೋವಿಡ್ ಗೋಳು, ರಾಗಿಣಿ ರಾಗ, ಬಂಡೆಯ ಮೇಲೆ ದಾಳಿ
ಎಲ್ಲಕ್ಕೂ ಒಂದು ಚಿಕ್ಕ ಬ್ರೇಕ್!
ನೇರ ದಿಟ್ಟ ನಿರಂತರ ವರದಿ ಭವಿಷ್ಯದೆಡೆಗೆ...
ಜಾಹೀರಾತುಗಳ ಗೋಡೆಯನ್ನು ದಾಟಿ
ಇನ್ನೇನೂ ಮಂಗಳನ ಅಂಗಳ ತಲಪಿಯೇ ಬಿಡುವಷ್ಟರಲ್ಲಿ
ಜಿಗಿ ಜಿಗಿ ಮಳೆ ಗುಡುಗು ಸಿಡಿಲು
ಕೈ ಕೊಟ್ಟ ಕರೆಂಟ್...
ಹಾಳು ಸರ್ಕಾರ...ಯಾವುದಾದ್ರು ಸರಿಯಾಗಿ ಮಾಡಿದ್ದುಂಟೆ?
ಹೊರಬಂದು ನೋಡಿದರೆ
ಮುಸ್ಸಂಜೆಯ ಮುಗಿಲು, ಚದುರಿದ ಮೋಡಗಳು, ಜಟಿ ಜಟಿ ಮಳೆ, ಮಣ್ಣ ವಾಸನೆ ಎಲ್ಲವೂ ಹಿತವೇ...
ತಲೆಯೆತ್ತಿದರೆ ಎದರು ಮನೆ ಡಿಶ್ ಮೇಲೆ ಆರಾಮಾಸನದಲ್ಲಿ ಕುಳಿತ ಮಂಗ... ಮೊಗದಲ್ಲೊಂದು ಮುಗುಳುನಗೆ ಮಿಂಚಿದಂತಾಯ್ತು
ಕರೆಂಟ್ ಬಂತೆಂದು ಮತ್ತೆ ಒಳ ಓಡಿದರೆ
ಅಷ್ಟರಲ್ಲೇ ಶುರುವಾಗಿತ್ತು ಮತ್ತೊಂದು ಬ್ರೇಕಿಂಗ್ ನ್ಯೂಸ್ನ ಅಬ್ಬರ
ಮಂಗಳಮುಖಿ ಮಂಗ...!!
ಮಂಗಳಮುಖಿ ಮಂಗ...!!
- ಸಂK
(ವಾಟ್ಸಾಪ್ ಫಾರ್ವಾರ್ಡ್ ಫೋಟೋದಿಂದ ಪ್ರೇರಿತ)
5 comments:
Wow Santhu Super!!
Bhavya: 🙌🏾 for the times we are living in 😁 sakkathagide.
Susheelಸಂದೀಪ: sakkat! newsmedia maadtiro wordplay karmakaandakke taunt kodakka ‘mangalamukhi’ word use madirodu? 😜🤔😆
👌🏼👌🏼👍🏼
ಹೌದು...ಮಂಗಳಮುಖಿ ಪದದ ಬಳಕೆ ಮಾಡಿರೋದು ನ್ಯೂಸ್ ಮಿಡಿಯಾದವರು ಮಾಡೋ ಕರ್ಮಕಾಂಡದ ವ್ಯಂಗ್ಯ.
ಸೂಕ್ಷ್ಮವಾಗಿ ಕಾಲೆಳೆಯೋ ಪ್ರಯತ್ನ...ತಲುಪಿದ್ದಕ್ಕೆ ಸಂತಸ😁
Rajesh:
ನನ್ನ ಅನಿಸಿಕೆ....
' ಮಂಗಳಮುಖಿ ' ಶಬ್ಧ ಬದಲಾಗಿ ಬೇರೆ ಶಬ್ಧ ಪ್ರಯತ್ನ ಮಾಡಬಹುದು.
ನಿನ್ನ ಪ್ರಕಾರ ಅದು ಮಂಗಳ ಗ್ರಹಕ್ಕೆ ಮುಖ ಮಾಡಿ ಕುಳಿತಿದ್ದರು, 'ಮಂಗಳಮುಖಿ ಮಂಗ’ ಬೇರೇನೇ ಅರ್ಥ ಕೊಡುತ್ತದೆ..
It is just my opinion as a reader..🤷♂️
ಥಾಂಕ್ಸ್ ರಾಜೇಶ್ ನಿನ್ನ ಪ್ರಾಮಾಣಿಕ ಅಭಿಪ್ರಾಯಕ್ಕೆ.
ಮಂಗಳಮುಖಿ ಪದದ ಬಳಕೆ ಸೂಕ್ಷ್ಮವಾಗಿ ಮಾಧ್ಯಮದವರ ಕಾಲೆಳೆಯೋ ಪ್ರಯತ್ನ. ಬ್ರೇಕಿಂಗ್ ನ್ಯೂಸ್ ಕೊಡೋ ಗಡಿಬಿಡಿಯಲ್ಲಿ ಆಗುವ ಅಚಾತುರ್ಯವನ್ನು ಬಿಂಬಿಸೋ ಪ್ರಯತ್ನ. ಈಗ ಒಂದು !! ಸೇರಿಸಿದ್ದೇನೆ ...
Post a Comment